Namma Bailhongal Dj Song Roadshow Mix Lyrics
- Genre:Electronic
- Year of Release:2022
Lyrics
ಗಂಡು ಮೆಟ್ಟಿದ ನಾಡು
ಗಂಡುಗಲಿಗಳ ಬೀಡು
ವೀರ ಶೂರರ ನೋಡು
ಕೇಳು ನಮ್ಮ ಈ ಹಾಡು
ಈ ನಾಡು ಬೆಳವಲ ನಾಡ ಹೂನ್ನ ಹೊತ್ತ ಭೂಮಿ
ವೀರ ರಾಣಿ ಚೆನ್ನಮ್ಮ ತಾಯಿಯ ಅಂಶವಿರುವ ಭೂಮಿ
ಈ ಬೀಡು ದೇಶಪ್ರೇಮದ ಮಕ್ಕಳಿರುವ ಭೂಮಿ
ಕನ್ನಡನಾಡಿನ ವೀರ ಯೋಧರ ಚರಿತೆ ಹೊತ್ತ ಭೂಮಿ
ಸಂಗೊಳ್ಳಿ ರಾಯಣ್ಣನಂಥ ಬಂಟರಿರುವ ಊರು
ಕನ್ನಡಾಂಬೆಗೆ ಜೈ ಎನ್ನುವ ನಮ್ಮೂರು
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ
ನಾಡಪ್ರೇಮಿ ಬಾಳಪ್ಪನವರ ಅಮಟೂರು ಒಮ್ಮೆ ನೋಡು
ಮಹಾತಾಯಿ ಮಲ್ಲಮ್ಮ ನೆಲೆಸಿದ ಬೆಳವಡಿ ನೋಡು
ಸಾಧುಸಂತರು ನೆಲೆಸಿ ಹರಸಿದ ಪುಣ್ಯ ಭೂಮಿ ನಮದು
ಮುಕ್ಕೋಟಿ ದೇವರ ಕೃಪೆಯು ಇರುವ ಭೂಮಿ ನಮದು
ಈ ನಾಡಿನ ಜನರ ಹಸಿವ ನೀಗಿಸವ ರೈತರಿರುವರಿಲ್ಲಿ
ದಾಹ ತೀರಿಸುತ ಮಲಪ್ರಭೆಯು ಹರಿಯುತಿಹಳು ಇಲ್ಲಿ
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ
ಸ್ವಾಭಿಮಾನದಿ ಮೈಯ್ಯ ಬಗ್ಗಿಸಿ ದುಡಿದು ತಿನ್ನುವವರು
ಕಾಯಕವೇ ಕೈಲಾಸವೆಂಬ ಮಂತ್ರಕೆ ಮುಡಿ ಇವರು
ಪ್ರೀತಿ ಪ್ರೇಮದಿ ಮನವ ಗೆದ್ದರೆ ಕೈಮುಗಿಯುವವರು
ಮೋಸದಿ ಬೆನ್ನಿಗೆ ಚೂರಿ ಚುಚ್ಚಿದರೆ ಕೈಯ್ಯಎತ್ತುವವರು
ದೋಸ್ತೀಗೆ ಜೀವ ನೀಡುವ ಮುಗ್ಧ ಮನಸ್ಸಿನವರು
ದ್ವೇಷದಿ ಕದನಕೆ ನಿಂತರೆ ಅಡ್ಡಡ್ಡ ಸೀಳುವವರು
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ
ನೋಡ ನೋಡ ನೋಡ ಅಜ್ಜನ ಪಟಗ ಸ್ಟೈಲ್ ನೋಡ
ಕೇಳ ಕೇಳ ಕೇಳ ಆರ್ ಎಕ್ಸ್ 100 ಸೌಂಡ್ ಕೇಳ
ನಮ್ಮ ಗತ್ತ ನೋಡ ದೌಲತ್ತ ನೋಡ
ಗಾಡಿ ಹತ್ತಿ ಬಂದ ನಮ್ಮ ಸೈನ್ಯಾ ನೋಡ
ಬಂತು ನೋಡು ಯುವಕರ ದಂಡು
ಕೂಡಿ ನಿಂತರೆ ಹೂವಿನ ಚೆಂಡು
ಕೆಣಕಿ ಬಂದರೆ ನಮ್ಮನು ಕಂಡು
ಆಗಿಬಿಡುವೆವು ಬೆಂಕಿಯ ಚೆಂಡು
ಜಾತಿ ಮತಗಳ ಭೇದವಿಲ್ಲದೆ ಕೂಡಿ ಬಾಳುವ ಮನವು ಇಲ್ಲಿದೆ
ಹಿಂದೂ ಮುಸ್ಲಿಂ ಸಿಖ್ ಇಸಾಯಿ ಎಲ್ಲರೂ ಇಲ್ಲಿ ಭಾಯಿ ಭಾಯಿ
ಗಡಿ ನಾಡ ಬೆಳಗಾವಿ ಹೆಮ್ಮೆಯ ಊರು ಬೈಲಹೊಂಗಲ
ಸಕ್ಕರೆ ನಾಡಿನ ಅಕ್ಕರೆ ಮನದ
ಚೊಕ್ಕ ಪ್ರೀತಿಯ ನಮ್ಮ ಈ ನೆಲ
ಇತಿಹಾಸಕೆ ಅಡಿಪಾಯ ನಮ್ಮೂರು
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ
ನಮ್ಮ ಬೈಲಹೊಂಗಲ