Loading...

Download
  • Genre:Acoustic
  • Year of Release:2020

Lyrics

Eesha Ninna Charana Bhajane Aasheyinda Maaduvenu

Dosha Rashi Naasha Maadu Shreesha Keshava

ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು ದೋಶರಾಶಿ ನಾಶಮಾಡು ಶ್ರೀಶ ಕೇಶವ


Sharanu Hokkenayya Yenna Marana Samayadalli Ninna

Charana Smarane Karunisayya Narayana

ಶರಣು ಹೊಕ್ಕೆನಯ್ಯ ಎನ್ನ | ಮರಣ ಸಮಯದಲ್ಲಿ ನಿನ್ನ ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ


Shodhisenna Bhavada Kalusha Bhodisayya Gyanavenage

Baadhisuva Yamana Baadhe Bidisu Maadhava

ಶೋಧಿಸೆನ್ನ ಭವದ ಕಲುಶ | ಭೋಧಿಸಯ್ಯ ಜ್ಞಾನವೆನಗೆ ಬಾಧಿಸುವ ಯಮನ ಬಾಧೆ | ಬಿಡಿಸು ಮಾಧವ


Hindaneka Yonigalali Bandu Bandu Nondenayya

Indu Bhavada Bandha Bidisu Thande Govinda

ಹಿಂದನೇಕ ಯೋನಿಗಳಲಿ | ಬಂದು ಬಂದು ನೊಂದೆನಯ್ಯ ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ


Bhrashtanenisa Beda Krishna Ishtu Maatra Bedikombe

Shishtarodane Ittu Kashta Bidisu Vishnuve

ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ


Madananayya Ninna Mahime Vadanadalli Nudiyuvanthe

Hrudayadalli Hudugisayya Madhusoodhana

ಮದನನಯ್ಯ ನಿನ್ನ ಮಹಿಮೆ | ವದನದಲ್ಲಿ ನುಡಿಯುವಂತೆ ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ


Kavidukondu Iruva Paapa Savidu Poguvanthe Maado

Javana Badheyannu Bidisu Thrivikrama

ಕವಿದುಕೊಂಡು ಇರುವ ಪಾಪ | ಸವೆದು ಪೋಗುವಂತೆ ಮಾಡಿ ಜವನ ಬಾಧೆಯನ್ನು ಬಿಡಿಸೋ | ಶ್ರೀತ್ರಿವಿಕ್ರಮ


Kamajanaka Ninna Naama Premadinda Paaduvantha

Nemavenage Paalisayya Swami Vaamana

ಕಾಮಜನಕ ನಿನ್ನ ನಾಮ | ಪ್ರೇಮದಿಂದ ಪಾಡುವಂಥ ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ


Modalu Ninna Paada Pooje Odaguvanthe Maado Yenna

Hrudayadolage Sadana Maado Mudhadhi Shridara

ಮೊದಲು ನಿನ್ನ ಪಾದಪೂಜೆ | ಒದಗುವಂತೆ ಮಾಡೋ ಎನ್ನ ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ


Husiyanaadi Hotte Horeva Vishayadalli Rasikanendu

Husige Haakadiro

Hrushikeshane ಹುಸಿಯನಾಡಿ ಹೊಟ್ಟೆ ಹೊರೆವ | ವಿಷಯದಲ್ಲಿ ರಸಿಕನೆಂದು ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ


Biddu Bhavadaneka Januma Baddhanaagi Kalushadinda

Geddupopa Buddhi Thoro Padmanabhane

ಬಿದ್ದು ಭವದನೇಕ ಜನುಮ | ಬದ್ದನಾಗಿ ಕಲುಷದಿಂದ ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ


Kaama Krodha Bidisi Ninna Naama Jihveyolage Nudiso

Sri Mahaanubhavanaada Daamodara

ಕಾಮಕ್ರೋಧ ಬಿಡಿಸಿ ನಿನ್ನ | ನಾಮ ಜಿಹ್ವೆಯೊಳಗೆ ನುಡಿಸು ಶ್ರೀಮಹಾನುಭಾವನಾದ ದಾಮೋದರ


Pankajaaksha Neenu Yenna Manku Buddhiyannu Bidisi

Kinkaranna Maadikollo Sankarshana

ಪಂಕಜಾಕ್ಷ ನೀನೆ ಎನ್ನ | ಮಂಕುಬುದ್ಧಿಯನ್ನು ಬಿಡಿಸಿ ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ


Yesu Januma Bandarenu Dasanallavenu Naanu

Ghaasi Madadiru Innu Vasudevane

ಏಸು ಜನ್ಮ ಬಂದರೇನು | ದಾಸನಲ್ಲವೇನು ನಾನು ಘಾಸಿ ಮಾಡದಿರು ಇನ್ನು ವಾಸುದೇವನೇ


Buddhi Shoonyanaagi Yenna Baddha Kaaya Kuhaka Manava

Thiddi Hrudaya Shuddhi Maado Pradyumnane

ಬುದ್ಧಿ ಶೂನ್ಯನಾಗಿ ಎನ್ನ | ಬದ್ಧಕಾಯ ಕುಹಕ ಮನವ ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ


Janani Janaka Neene Yendu Nenevenayya Deena Bandhu

Yenage Mukthi Paalisinnu Aniruddane

ಜನನಿ ಜನಕ ನೀನೆಯೆಂದು | ನೆನೆವೆನಯ್ಯ ದೀನಬಂಧು ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ


Harushadinda Ninna Nama Smarisuvanthe Maadu Nema

Irisu Charanadalli Prema Purushottama

ಹರುಶದಿಂದ ನಿನ್ನ ನಾಮ | ಸ್ಮರಿಸುವಂತೆ ಮಾಡು ಕ್ಷೇಮ ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ


Saadhu Sanga Kottu Ninna Paada Bhajane Itthu Enna

Bheda Maadi Nodadiro Sri Adhokshaja

ಸಾಧುಸಂಗ ಕೊಟ್ಟು ನಿನ್ನ | ಪಾದಭಜನೆ ಇತ್ತು ಎನ್ನ ಭೇದಮಾಡಿ ನೋಡದಿರೊ ಹೇ ಅಧೋಕ್ಷಜ


Charu Charana Thori Yenage Paarugaanisayya Konege

Bhara Haakiruve Ninage Narasimhane

ಚಾರುಚರಣ ತೋರಿ ಎನಗೆ | ಪಾರುಗಾಣಿಸಯ್ಯ ಕೊನೆಗೆ ಭಾರ ಹಾಕಿರುವೆ ನಿನಗೆ ನಾರಸಿಂಹನೇ


Sanchithaadi Papagalanu Kinchithaada Peedegalanu

Munchithavaagi Kaledu Poreyo Swami Achyutha

ಸಂಚಿತಾದಿ ಪಾಪಗಳು | ಕಿಂಚಿತಾದ ಪೀಡೆಗಳನು ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ


Gnyana Bhakti Kottu Ninna Dhyanadalli Ittu Sada

Heena Buddhi Bidisu Munna Shree Janardhana

ಜ್ಞಾನ ಭಕುತಿ ಕೊಟ್ಟು ನಿನ್ನ | ಧ್ಯಾನದಲ್ಲಿ ಇಟ್ಟು ಸದಾ ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ


Japa Thapa Anushtaana Villade Kupithagaamiyaada Enna

Krupeya Maadi Kshamisabeku Upendrane

ಜಪತಪಾನುಷ್ಠಾನವಿಲ್ಲ | ಕುಪಿತಗಾಮಿಯಾದ ಎನ್ನ ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ


Moreya Iduvenayya Ninage Sharadhi Shayana Shubhamathiya

Irisu Bhaktarolage Parama Purusha Sri Hari

ಮೊರೆಯ ಇಡುವೆನಯ್ಯ ನಿನಗೆ | ಶರಧಿಶಯನ ಶುಭಮತಿಯ ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ


Huttisale Beda Innu Huttisidake Paalisinnu

Ishtu Maatra Bedikombe Shri Krishnane

ಪುಟ್ಟಿಸಲೇಬೇಡ ಇನ್ನು | ಪುಟ್ಟಿಸಿದಕೆ ಪಾಲಿಸಿನ್ನು ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ


Sathyavaada Naamagalanu Nithyadalli Patisuvavara

Arthiyinda Salahuthiruva Kartru Keshava

ಸತ್ಯವಾದ ನಾಮಗಲನು | ನಿತ್ಯದಲ್ಲಿ ಪಠಿಸುವರಿಗೆ ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ


Mareyadale Hariya Naama Baredu Odhi Kelidavage

Karedu Mukti Koduva Neleyaadikeshava

ಮರೆಯದಲೆ ಹರಿಯ ನಾಮ | ಬರೆದು ಓದಿ ಪೇಳ್ದವರಿಗೆ ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ

Similar Songs

+

      -   or   -

      -   or   -

      NG +234

          Please Select A Playlist

          Add New Playlist

          Share on

          Embed: Love & Light EP

          Custom Size :

          • Default
          • Desktop(300*600)
          • Mobile(300*250)

          Type :

          • HTML/HTML5 (WordPress Supported)
          Get Boomplay Premium
          for
          Payment Method
          Pay With
            Review and pay
            Order Date
            Payment Method
            Due Today
            Flutterwave
              Subscription Successful

              Congratulations! You have successfully activated Boomplay 1 Month Premium.

              Now you have access to all the features of Boomplay App.
              Payment Failed

              Please check your balance and then try again.

              You'll lose your subscription if we don't have a working payment method for your account, so please check your payment details.
              Need help? Contact Boomplay Subscription Support.
              Payment Processing...
              10 s

              Payment is being processed by . Please wait while the order is being comfirmed.

              Payment Processing
              Your order is processing, and it may take up to a few days for the service provider to handle your payment. Please kindly stay tuned and check your order status in ‘User Center’.
              About Order Status